Friday, January 16, 2009

ಯುವ-ಯುವ ಒಹ್ ಯುವ-ಯುವ..........ಪೂರ್ವದಿಂದ ಪಶ್ಚಿಮಕ್ಕೆ........

ಭಾರತದ ಇತಿಹಾಸದಲ್ಲಿಯೇ ಆಗಲೀ ಅಥವಾ ಇಂದಿನ ಪೀಳಿಗೆಯಲ್ಲೇ ಆಗಲೀ ನಮ್ಮ ಯುವಶಕ್ತಿ ಕಬ್ಬಿಣದಂತಹದು. ಆದರೆ ಈ ಕಬ್ಬಿಣನ ಎಷ್ಟರ ಮಟ್ಟಿಗೆ ನಾವು ಒಳ್ಳೆಯ ಒಂದು ರೂಪಕ್ಕೆ ತರುವುದಕ್ಕೆ ಸಾಧ್ಯ ಎಂಬುದು ಒಂದು ಯಕ್ಷಪ್ರಶ್ನೆಯಾಗಿದೆ. ಮಾಹಿತಿ ತಂತ್ರಜ್ಞಾನ ಒಳ್ಳೆಯ ಸಂಬಳ ಕೊಟ್ಟರೂ ಒಳ್ಳೆಯ ಸಂಸ್ಕಾರವನ್ನು ಕೊಡುತ್ತಿಲ್ಲ ಎಂಬುದು ಪ್ರತಿಯೊಬ್ಬ ವಯಸ್ಕರ ಅಭಿಪ್ರಾಯ. ಇದು ಸತ್ಯ. ಆದರೆ ಕೆಲವು ವಿಂಗಡೆಗಳನ್ನ ಇಲ್ಲಿ ಮಾಡಲೇ ಬೇಕು. ಸಾಮಾನ್ಯವಾಗಿ ಬಿ.ಇ. ಮುಗಿಸಿ ಕಾಲೇಜಿನ ಕ್ಯಾಂಪಸ್ ಇಂಟರ್ವ್ಯೂನ ಮೂಲಕ ಕಂಪನಿಗಳಿಗೆ ಸೇರುವ ಜನತೆಯನ್ನು ಹಿಡಿಯುವುದು ಬಹಳ ಕಷ್ಟದ ಕೆಲಸ. ಆಚೆ ಬರ್ತಿದ್ದ ಹಾಗೆನೆ ತಿಂಗಳಿಗೆ ೨೫,೦೦೦ ಸಂಬ್ಳ ಕೊಟ್ಟು ಪಬ್-ಮಾಲ್ ಅಂತ ಮಜಾ ಮಾಡೋ ನಮ್ಮ ಹುಡುಗರು ಹಾಗು ಹುಡುಗಿಯರೂ ದೇಶದ ಬಗ್ಗೆ ಎಷ್ಟು ಚಿಂತನೆ ಮಾಡ್ತಾರೆ ಅಂತ ಅಂದುಕೊಂದಿದ್ದಿರಾ? ಇದು ತಪ್ಪಿಲ್ಲ ಅಂತ ಅಂದುಕೊಳ್ಳೋಣ, ಆದರೆ ನಾವೇ ದೇಶದ ಚಿಂತನೆ ಮಾಡದೆ ಇದ್ದರೆ, ಮುಂದಿನ ದಾರಿ ಹೆಜ್ಜೆ ಏನಾಗುತ್ತೆ? "we are contemporary" ಅಂತ ಹೇಳ್ಕೊಂಡು ಪಾಶ್ಚಿಮಾತ್ಯ ಜನರ ತರಹ ಬಾಳುತ್ತಿರುವ ನಾವು ಈ ದೇಶಕ್ಕೆ ಏನ್ ಮಾಡುತ್ತೇವೆ?

ನಾನು ಬೇಟಿ ಮಾಡಿದ ಒಬ್ಬ ಹುಡುಗಿ ಹೇಳ್ತಿದ್ಲು ಯಾರನ್ನಾದರು ಇಷ್ಟ ಪಟ್ಟರೆ ಸಾಕು ಗೋತ್ರ, ಕುಲ ಎಲ್ಲ ಬೇಡ ಅಂತ...ಇಷ್ಟ ಪಟ್ಟು ಮದುವೆ ಆಗಬೇಕಾಗಿರೋದು ೧೦೦ ಪಾಲು ಸತ್ಯ... ಆದರೆ ನಮ್ಮ ಗೋತ್ರದ ಬಗ್ಗೆ ಆಗಲೀ, ಧರ್ಮದ ಬಗ್ಗೆ ಆಗಲೀ ತಿಳಿಯದೆ ಮಾತನಾಡುವುದು ಸರಿಯಾದ ಯೋಚನೆಯೇ? ನಮ್ಮ ಪೂರ್ವಿಕರು ಗೋತ್ರ ಯಾಕೆ ಮಾಡಿದ್ದಾರೆ ಅಂತ ಎಷ್ಟು ಜನಕ್ಕೆ ಗೊತ್ತು? ಇಂದಿನ "genetic problems" ನ ಸರಿ ಮಾಡುವ ಪ್ರಯತ್ನದಲ್ಲಿರೋ ಈ ನಮ್ಮ ನವ ವಿಜ್ಞಾನಕ್ಕೆ ಗೋತ್ರದ ಮಹಿಮೆ ಹೇಗೆ ಗೊತ್ತಾಗಬೇಕು? ನಮ್ಮವರು ಒಂದೇ ಗೋತ್ರದಲ್ಲಿ ಮದುವೆ ಆಗಬಾರದು ಅಂತ ಹೇಳೋದು ಹುಟ್ಟುವ ಮಕ್ಕಳಲ್ಲಿ ಮೂಲಕ್ಕೆ(genetic) ಸಂಭಂದಿಸಿದ ತೊಂದರೆ ಬರದೆ ಇರಲಿ ಅಂತ... ನಮ್ಮ ಸಪ್ತರಿಷಿಗಳು ಆಗಲೇ ಈ ಯೋಚನೆಯನ್ನು ಮಾಡಿ ವಿಂಗಡಣೆ ಮಾಡಿದ್ದರು ಅನ್ಸುತ್ತೆ.... ಇನ್ನು ಧರ್ಮದ ಬಗ್ಗೆ ಮಾತಾಡುವಾಗ ನಮ್ಮ ಜನ "I am an atheist" ಅನ್ನೋ ಒಂದು ವಾಕ್ಯವನ್ನು ಉಪಯೋಗಿಸಿ ತಾವು ಬುದ್ದಿಜೀವಿಗಳಾಗಿ ಪ್ರತಿಬಿಂಬಿಸುತ್ತಾರೆ ಇಂದಿನ ಜನಾಂಗಕ್ಕೆ........... ಎಂತಹ ಮಹಾನ್ ಯೋಚನೆ ಆಲ್ವಾ? ಈ ರೀತಿ ಯೋಚನೆ ಮಾಡಿದ್ರೆ ನಾವು ಪಶ್ಚಿಮದವರಗುತ್ತೇವೆ ಅನ್ನೋ ಭ್ರಮೆ ನಮ್ಮ ಜನಕ್ಕೆ... ಆದರೆ ಪಶ್ಚಿಮದ ಜನ ವೇದ, ಉಪನಿಷತ್ತು, ಯೋಗವಾಸಿಷ್ಠ, ಮಹಾಭಾರತ, ರಾಮಾಯಣದ ಬಗ್ಗೆ ಕಾಳಜಿ ಜಾಸ್ತಿ ಮಾಡಿಕೊಂಡಿದ್ದಾರೆ... ಸ್ವಲ್ಪ ವರ್ಷಗಳ ನಂತರ ಯೋಗ ಪದ್ಧತಿ ಕೂಡ ಅವರದೇ ಅನ್ನೋ ದಿನ ದೂರ ಏನು ಇಲ್ಲ ಬಿಡಿ...

ಮತ್ತೊಂದು ವಿಭಾಗದವರು ಇದ್ದಾರೆ ... ಆಚೆ ದೇಶದಲ್ಲಿ ಕಾಲು ಇಡುತ್ತಿದ್ದ ಹಾಗೇನೆ ಸ್ವರ್ಗಕ್ಕೆ ಕಾಲು ಇಟ್ಟ ಹಾಗೆ ಆಡುತ್ತಾರೆ.... ಆಮೇಲೆ ನಮ್ಮ ದೇಶಕ್ಕೆ ಹಿಂದಿರುಗಿದ ನಂತರ ವಿಚಿತ್ರವಾಗಿ ನಡೆದುಕೊಳ್ಳಲು ಪ್ರಾರಂಭಿಸುತ್ತಾರೆ..... ಅವರಲ್ಲಿ ಒಳ್ಳೆಯ ಬದಲಾವಣೆ ಎಷ್ಟರ ಮಟ್ಟಿಗೆ ಆಗಿದೆ ಎಂಬುದು ಒಂದು ದೊಡ್ಡ ಸವಾಲು? ಯಾಕೆ ಅಂದರೆ ನಾನು ನೋಡಿದ ಹಾಗೆ ಅವರು ಬೇರೆ ದೇಶದ ಜನರ ಜೊತೆ ಸೇರುವುದು ತುಂಬಾ ಕಡಿಮೆ.... ಎಲ್ಲರು ಹೀಗಿರುವುದಿಲ್ಲ, ಆದರೆ ಬಹಳಷ್ಟು ಜನ ಹೀಗಿರುವುದನ್ನು ನಾನೇ ಸ್ವತಃ ಕಂಡಿದ್ದೇನೆ... ನಾವು ಬೇರೆ ದೇಶದ ಜನರ ಜೊತೆ ಸೇರಿ ಮಾತನಾಡಿದರೆ ಮಾತ್ರ ನಮ್ಮ ದೇಶದ ಅಪಾರತೆ ತಿಳಿಯುವುದು.... ವಿದೇಶದ ಸಾಮನ್ಯ ಜನರು ಕೇಳೋ ಒಂದೊಂದು ಪ್ರಶ್ನೆಗೂ ನಾವು ಉತ್ತರ ಕೊಡಬೇಕು...ಉದಾಹರಣೆಗೆ "ನಿನಗೆ ಪುನರ್ಜನ್ಮದ ಬಗ್ಗೆ ನಂಬಿಕೆ ಎಷ್ಟಿದೆ ಅಂತ ಅವರು ಕೇಳುತ್ತಾರೆ?" ಆಗ ನಮ್ಮ ಹುಡುಗರು ಆರಾಮಾಗಿ ಹೇಳುತ್ತಾರೆ ನನಗೆ ನಂಬಿಕೆ ಇಲ್ಲ ಅಂತ............ ನನಗೆ ಗೊತ್ತಿಲ್ಲ ಅಂದ್ರೆ ಅದು ಬೇರೆ ರೀತಿ, ಆದರೆ ನಾನು ನಂಬಲ್ಲ ಅನ್ನುವುದಕ್ಕೆ ಅದರ ಬಗ್ಗೆ ಏನು ತಿಳಿದುಕೊಂಡಿಲ್ಲ ಅಂತ ಅರ್ಥ... ನಮಗೆ ನಮ್ಮ ಸನಾತನ ಧರ್ಮದ ಬಗ್ಗೆ ಏನು ಗೊತ್ತಿಲ್ಲ ಅಂತ... ಗೊತ್ತಾಗೋದು ಬೇಡ ಬಿಡಿ ಅಂತಾರೆ ನಮ್ಮ ಹುಡುಗ್ರು/ಹುಡುಗಿಯರು.... "ಅಯ್ಯೋ ಆರಾಮಾಗಿ ನಮಗೆ ಬೇಕಾದ ದುಡ್ಡನ್ನು ಸಂಪಾದನೆ ಮಾಡ್ಕೊಂಡು ಮಜಾ ಮಾಡೋಣ... ಯಾವನಿಗೆ ಬೇಕು ಗುರು ಇದರ ಬಗ್ಗೆ ಚಿಂತೆ" ಅಂತಾರೆ ತುಂಬ ಜನ... ಹೌದು ಅವರು ಹೇಳೋದ್ರಲ್ಲಿ ಅರ್ಥ ಇದ್ದೇ ಇದೆ, ಮೊದಲು ತಿನಕ್ಕೆ ಇಲ್ಲ ಅಂದ್ರೆ ಇವೆಲ್ಲ ಯಾಕೆ ಅಂತ?

ಈ ರೀತಿ ತುಂಬ ಪ್ರಶ್ನೆಗಳು ನಮ್ಮ ಯುವ ಜನತೆಯನ್ನ ಕಾಡುತ್ತಾ ಇದೆ... ಇದಕ್ಕೆಲ್ಲ ಒಂದೇ ಪರಿಹಾರ... ಬ್ರಿಟಿಷರು ಕಂಡಂತಹ ಭಾರತ ನಮಗೆ ಬೇಡ... ಅವರು ಭವಿಷ್ಯದಲ್ಲಿ ಕಂಡಂತಹ ಭಾರತನೆ ಈಗ ನಾವು ನೋಡ್ತಿರೋದು... Macaulay ಹೇಳಿದ ಹಾಗೆ ನಾವು ಇಂಗ್ಲಿಶನವರ ರುಚಿಯನ್ನೇ ಅಳವಡಿಸಿಕೊಂಡಿದ್ದೇವೆ ಈಗ... ಆದ್ರೆ ನಮ್ಮ ಬಣ್ಣ ಮಾತ್ರ ಕುರಿ ಕಾಯುವವರದು ತಾನೆ? ಹಾಗೆ ಆಗಬಾರದು ಅಂದರೆ ನಮ್ಮ ಶಿಕ್ಷಣ ಪದ್ಧತಿ ಹೊಸ ರೂಪನ್ನು ತಾಳಲೇ ಬೇಕು.... ನಮ್ಮ ಕೆಲಸ ಕಾರ್ಯಗಳ ಮಧ್ಯದಲ್ಲಿ ನಾವು ಸ್ವಲ್ಪ ಸಮಯ ಇದರ ಕಡೆಗೆ ಮುಡುಪಾಗಿಡಬೇಕು... ವಿವೇಕಾನಂದರು ಮತ್ತು ಇನ್ನೂ ಮಹಾನ್ ವ್ಯಕ್ತಿಗಳು ಕಂಡಂತಹ ಭವ್ಯ ಭರತದ ಸ್ಥಾಪನೆ ಆಗಲೇ ಬೇಕು ಅಂದರೆ, ನಾವು ನಮ್ಮ ಪುರಾತನ ಗ್ರಂಥಗಳಲ್ಲಿ ಅಡಗಿರುವ ವಿಜ್ಞಾನವನ್ನು ಬೆಳೆಕಿಗೆ ತರಲೇಬೇಕು.... ವಿದೇಶಿಯರಿಂದ ಕಲಿಯಲೇಬೇಕಾದ ಒಂದು ನಿಯಮವೆಂದರೆ ಸ್ವಾವಲಂಬನೆ... ಪಾಶ್ಚಿಮಾತ್ಯ ಎಂದೆಂದಿಗೂ ನಮ್ಮದಲ್ಲ... ನಾವೇನಿದ್ದರೂ ಸನಾತನ ಧರ್ಮದ ರೂವಾರಿಗಳಾಗಿ "ಯಸ್ಮಿನ್ ವಿಗ್ನತೆ ತಸ್ಮಿನ್ ವಿಗ್ನತಾಂ" ಎಂಬಂತೆ ಬ್ರಹ್ಮಜ್ಞಾನದ ಕಡೆಗೆ ನಡೆಯಬೇಕು....

ಹೊಸಚಿಗುರು ಹಳೆಬೇರು ಕೂಡಿರಲು ಮರ ಸೊಗಸು ।
ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ ।।
ಋಷಿವಾಕ್ಯದೊಡನೆ ವಿಜ್ಞಾನಕಲೆ ಮೇಳವಿಸೆ ।
ಜಸವು ಜನಜೀವನಕೆ ಮಂಕುತಿಮ್ಮ ।।